Published 2024-10-24
Keywords
- ಡೋರನಹಳ್ಳಿ, ಸಾಮರಸ್ಯ, ಯೇಸುಸ್ವಾಮಿ, ಸಂತ ಆಂಥೋನಿ, ದಂತಕಥೆ, ಪುರಾಣ, ಸನ್ಯಾಸಿ, ಪ್ರತಿಮೆ, ಪೋರ್ಚುಗಲ್, ಕ್ರೈಸ್ತತತ್ವ, ಭಕ್ತಿ, ವಿಶ್ವಮಾನ್ಯ, ಮೌಖಿಕ, ಕ್ರೈಸ್ತ ಜಾನಪದ, ಸೀಮಾತೀತ, ವಿಶ್ವಪದ
How to Cite
ಎಂ. ಬ. (2024). ಧರ್ಮ ಸಾಮರಸ್ಯದ ತಾಣವಾಗಿ ಡೋರನಹಳ್ಳಿ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(2), 42–51. https://doi.org/10.59176/kjksp.v3i2.2394
Abstract
ಸೌಹಾರ್ದಯುತ ತಾಣವೊಂದು ಸಾಮರಸ್ಯವನ್ನು ಸಾಧಿಸಿಕೊಳ್ಳುವ ಹಿಂದಣದತ್ತ ಹಾಗೇ ಕಣ್ಣು ಹಾಯಿಸಿದರೆ, ಭೂಮಿತೂಕದ ಪ್ರೀತಿಯನ್ನು ಎದೆಯಲ್ಲಿ ಹೊತ್ತು ನಿರ್ಭೀತರಾಗಿ ಮುನ್ನಡೆದ ಕಾರುಣ್ಯಪೂರ್ಣ ನುಡಿಕಾರರ ದರ್ಶನವಾಗುತ್ತದೆ. ಮಾನವರ ಮನೋಭೂಮಿಗಳಲ್ಲಿ ಬೇರುಬಿಟ್ಟುಕೊಂಡಿದ್ದ ವಿಷಪೂರಿತ ಮುಳ್ಳು-ಕಳೆಯನ್ನು ಕಿತ್ತು, ಮಾನವೀಯತೆಯ ಬೆಳೆಯನ್ನು ಬೆಳೆದ ಪ್ರಜ್ಞಾರೈತರು ಅವರು. “ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಎಂದಾದರೂ ಫಲ ಕೊಡುತ್ತದೆ” ಎಂಬ ದರ್ಶನಕಾರ ದೇವನೂರರ ಮಾತಿನಂತೆ ನಿಸ್ವಾರ್ಥ ನೆಲಕಾಯಕ ಮಾಡಿದ ಚೇತನಗಳ ಮೂಲಕ ನೆಲದ ತುಂಬ ಸಾಮರಸ್ಯದ ತಾಣಗಳು ಮೈದಾಳಿಕೊಂಡಿರುವುದು ಚಾರಿತ್ರಿಕವಾದ ಸಂಗತಿ. ಅಂತಹ ತಾಣಗಳಲ್ಲಿ ಮೈಸೂರು ಸಮೀಪದ ಡೋರನಹಳ್ಳಿಯೂ ಒಂದಾಗಿದೆ.
Downloads
Download data is not yet available.
References
- 1. ಕ್ರೈಸ್ತ ಜನಪದ ಗೀತೆಗಳು; ಸಂ.ಡಾ.ಬಿ.ಎಸ್.ತಲ್ವಾಡಿ; ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ-೪೪; ಪದ್ಯ ಸಾಹಿತ್ಯ ಪ್ರಕಾರ, ಸಂಪುಟ-೨೫; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು; ೨೦೧೪; ಪುಟ ೨೧೬-೨೧೭.