ಸಂಪುಟ 3, ಸಂಚಿಕೆ 2, ಸೆಪ್ಟಂಬರ್ 2024
Articles

ಸಂಭವಾಮಿ ಯುಗೇ ಯುಗೇ

ವಾಣಿಶ್ರೀ ಬಿ. ಎಂ.
ಎಮ್. ಇ. ಎಸ್. ಕಲೆ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮಲ್ಲೇಶ್ವರಂ, ಬೆಂಗಳೂರು-೫೬೦೦೦೩

Published 2024-10-24

Keywords

  • ದಶಾವತಾರ, ವಿದ್ವಾಂಸರಾನನಾಬ್ಜ ದಿನೇಶಂ, ನವರಸಿಕರ ಜಿಹ್ವಾಮೃತ, ವಾರಿಧಿಜಾತೆಯಧೀಶ, ಹರಿಣಾಂಕಂ

How to Cite

ಬಿ. ಎಂ. ವ. (2024). ಸಂಭವಾಮಿ ಯುಗೇ ಯುಗೇ. ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 3(2), 29–41. https://doi.org/10.59176/kjksp.v3i2.2392

Abstract

ವಿಶ್ವ ಗುರುವಾದ ಭಾರತದ ಸನಾತನ ಧರ್ಮದಲ್ಲಿ ಅನಾದಿ ಕಾಲದಿಂದಲೂ ಅವತಾರಗಳ ಕಲ್ಪನೆ ಪ್ರಚಲಿತವಾಗಿದೆ. ರಾಮಾಯಣ, ಮಹಾಭಾರತ, ಭಾಗವತ, ಅಷ್ಟಾದಶ ಪುರಾಣಗಳು ಮೊದಲಾದ ಗ್ರಂಥಗಳಲ್ಲಿ ದೇವತೆಗಳ ಅನೇಕ ವಿವಿಧ ಅವತಾರಗಳ ವರ್ಣನೆಯಿದೆ. ಜಗತ್ತಿನ ಉದ್ಧಾರಕ್ಕಾಗಿ, ಸಜ್ಜನರ ಉನ್ನತಿಗಾಗಿ ದೇವತೆಗಳು ಭುವಿಯಲ್ಲಿ ಜನ್ಮ ತಾಳುವುದನ್ನು ಅವತಾರ ಎನ್ನಬಹುದು. ಭೂಮಿಯಲ್ಲಿ ಅಧರ್ಮ ಹೆಚ್ಚಾಗಿ ಸಾಧು ಸಜ್ಜನರನ್ನು ದುಷ್ಟರು ಕಾಡುತ್ತಾ ಕ್ಷೋಭೆ ಉಂಟಾದಾಗ ಪರಮಾತ್ಮ ಅವತಾರಗಳನ್ನೆತ್ತಿ ತನ್ನ ಭಕ್ತರನ್ನು ರಕ್ಷಿಸಿದ್ದಾನೆ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ದೇವರು ಯಾವುದಾದರೂ ರೂಪದಲ್ಲಿ ಅವತರಿಸಿ ಬರುತ್ತಾನೆ. ಭಗವಂತನು ಅನಂತ ರೂಪಿ ಅವನು ಅನೇಕಾನೇಕ ಅವತಾರಗಳನ್ನು ಎತ್ತಿದ್ದರೂ ದಶಾವತಾರಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಂಡಿವೆ. ವಿಷ್ಣುವಿನ ಹತ್ತು ಅವತಾರಗಳು ದಶಾವತಾರ ಎಂದು ಪ್ರಖ್ಯಾತವೂ, ಪ್ರಚಲಿತವೂ ಆಗಿದೆ. ಶ್ರೀಹರಿಯು ತನ್ನ ಭಕ್ತರಿಗಾಗಿ ಅವತಾರವನ್ನೆತ್ತಿ ತಾನು ಭಕ್ತ ಪರಾಧೀನ ಎಂದು ನಿರೂಪಿಸಿದ್ದಾನೆ. ಇತರ ದೇವತೆಗಳೂ ಸಂದರ್ಭಾನುಸಾರ ಅವತಾರಗಳನ್ನೆತ್ತಿ ಶ್ರೀಹರಿಯ ಕಾರ್ಯದಲ್ಲಿ ತಮ್ಮ ಭಾಗದ ಸೇವೆ ಸಲ್ಲಿಸಿ ಹರಿಯ ಕೃಪೆಗೆ ಪಾತ್ರರಾಗಿದ್ದಾರೆ.  

ಭಗವಂತ ಲೋಕ ಕಲ್ಯಾಣಾರ್ಥವಾಗಿ ಮಾನವ ರೂಪ ಮಾತ್ರವಲ್ಲದೆ ಬೇರೆ ಬೇರೆ ರೂಪಗಳಲ್ಲಿಯೂ ಅವತರಿಸುವನು. ದಶಾವತಾರ ಪರಿಕಲ್ಪನೆಯುಳ್ಳ ಹಲವಾರು ಕೃತಿಗಳು ಭಾರತೀಯ ಭಾಷೆಗಳಲ್ಲಿ ರಚಿತವಾಗಿವೆ. ಪ್ರಸ್ತುತ ಮಲ್ಲರಸನೆಂಬ ಕವಿ ಚಂಪೂವಿನಲ್ಲಿ ರಚಿಸಿರುವ ದಶಾವತಾರ ಚರಿತೆಯನ್ನು ಕುರಿತ ಅಧ್ಯಯನ ಇದಾಗಿದೆ. 

Downloads

Download data is not yet available.

References

  1. ೧. ದಶಾವತಾರ ಚರಿತೆ, ಮಲ್ಲರಸ, ಸಂ. ವೈ. ಸಿ ಭಾನುಮತಿ ಮೈಸೂರು ವಿ. ವಿ., ೧೯೭೮
  2. ೨. ಶ್ರೀಮದ್ಭಾಗವತ ಮಹಾಪುರಾಣಂ, ಲಕ್ಷ್ಮಣದಾಸ ವೇಲಣಕರ್, ಗೀತಾ ಪ್ರೆಸ್ ಗೋರಖ್‌ಪುರ್ .,೨೦೧೩
  3. ೪. ಕನ್ನಡ ಮಹಿಳಾ ಹರಿದಾಸರು, ಡಾ. ವಾಣಿಶ್ರೀ ಬಿ.ಎಂ.,ನಿವೇದಿತ ಪ್ರಕಾಶನ ೨೦೧೮
  4. ೫. ಹರಪನಹಳ್ಳಿ ಭೀಮವ್ವನ ಕೀರ್ತನೆಗಳು, ಸಂ ಡಾ. ಟಿ. ಎನ್. ನಾಗರತ್ನ.,ಕರ್ನಾಟಕ ಸರ್ಕಾರ ೨೦೦೩