Published 2024-10-24
Keywords
- ಸಮಾಜ, ಸಮಾನತೆ, ಸಾಮಾಜಿಕ ಮೌಲ್ಯ, ಡಾಂಭಿಕತೆ, ಭಕ್ತಿ, ಸಂಸಾರ ಇತ್ಯಾದಿ.
How to Cite
Abstract
ಕನ್ನಡ ಸಾಹಿತ್ಯದಲ್ಲಿ ಅನೇಕ ಭಿನ್ನತೆಗಳು, ವೈವಿಧ್ಯತೆಗಳು ಮತ್ತು ವೈರುಧ್ಯಗಳಿದ್ದಾಗಲೂ ಕೂಡ ಕನ್ನಡ ಭಾಷೆ ಹಾಗೂ ಸಾಹಿತ್ಯವು ಸಾವಿರಾರು ವರ್ಷಗಳಿಂದ ತನ್ನತನದ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿದೆ. ಇಂತಹ ಸಾಹಿತ್ಯವು ಏಕಮುಖಿಯಾಗಿ ನೆಡೆದುಬಂದಿಲ್ಲ. ಕಾಲದ ಒತ್ತಡಕ್ಕೆ ಸಿಲುಗಿ, ಅಧಿಕಾರಸ್ಥರ ತೋಳ್ಬಂದಿಯಲ್ಲಿ ನಲುಗಿ ಕನ್ನಡವು ಅನೇಕ ರೂಪಾಂತರಗಳನ್ನು, ಏಣಿ-ಶ್ರೇಣಿಗಳನ್ನು ಬೆಳೆದಿದೆ. ಇಂತಹ ಕನ್ನಡ ಸಾಹಿತ್ಯದ ಇತಿಹಾಸವನ್ನು ಕ್ರಿ.ಶ. ೪೫೦ರಲ್ಲಿ ದೊರೆತ ‘ಹಲ್ಮಿಡಿ’ ಶಾಸನದಿಂದ ಗುರ್ತಿಸಲಾಗಿದೆ. ಇಡೀ ಸಾಹಿತ್ಯಿಕ ಪರಂಪರೆಯಲ್ಲಿನ ಬೌದ್ಧಿಕ ಚಿಂತನೆಯು ಕನ್ನಡ ಹಾಗೂ ಕನ್ನಡತನವನ್ನು ಕುರಿತು ಹೊಂದಿದ್ದ ಇಂತಹ ಅನೇಕ ಅಭಿಮಾನದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಕನ್ನಡದ ಆದಿಕವಿ ಎಂದೇ ಹೆಸರಾದ ಪಂಪ ಕೂಡ ಸಂಸ್ಕೃತದ ವ್ಯಾಸನ ಮಹಾಭಾರತವನ್ನು ಕನ್ನಡಕ್ಕೆ ರೂಪಾಂತರಿಸುವ ಕೆಲಸವನ್ನು ಅತ್ಯಂತ ಪ್ರೀತಿಯಿಂದ ಮಾಡಿದ್ದಾನೆ. ಅಂದರೆ ೯-೧೦ನೇ ಶತಮಾನದಲ್ಲಿದ್ದ ಪಂಪ ಆ ಕಾಲದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ನಿರೂಪಿಸುವಲ್ಲಿ ತನ್ನ ‘ಪಂಪ ಭಾರತ’ ಕಾವ್ಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಪಂಪ ತಾನು ಸಂಸ್ಕೃತದ ಮಹಾಕಾವ್ಯವನ್ನು ಕನ್ನಡಕ್ಕೆ ತರುವಲ್ಲಿ ಅನೇಕ ರೂಪಾಂತರಗಳನ್ನು ಕನ್ನಡಕ್ಕೆ ಹೊಂದುವಂತೆ ಪರಿವರ್ತಿಸಿಕೊಂಡು ಕಾವ್ಯವನ್ನು ಸೃಷ್ಟಿಸುವ ಕೆಲಸ ಮಾಡಿದ್ದಾನೆ. ಇಂತಹ ಸಾಹಿತ್ಯದ ಹಿನ್ನೆಲೆಯನ್ನು ಮತ್ತು ಭವ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯಕ್ಕೆ ಜನಸಾಮಾನ್ಯರಿಗೂ ನಿಲುಕಬಹುದಾದ ವಚನ ಸಾಹಿತ್ಯ ಎನ್ನುವ ಪ್ರಕಾರವೊಂದು ರೂಪು ತಳೆದದ್ದು ಆಶ್ಚರ್ಯವೆನ್ನಬಹುದು. ಪಂಪ, ರನ್ನ, ಪೊನ್ನ, ಜನ್ನರಂತಹ ಧೀಮಂತ ಕವಿವರ್ಯರು ರಚನೆ ಮಾಡಿದ ಹಾದಿಯೊಂದನ್ನು ಬಿಟ್ಟು ತಮ್ಮದೇ ವಿಭಿನ್ನ ಶೈಲಿಯೊಂದನ್ನು ಸೃಷ್ಟಿ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯೊಂದು ಅವರಿಗೆ ಹೇಗೆ ಹುಟ್ಟಿತು? ಅದಕ್ಕೆ ನಿರ್ದಿಷ್ಟವಾದ ಕಾರಣಗಳೇನು? ಎಂದು ತಿಳಿಯುವುದು ಅತ್ಯಂತ ಮುಖ್ಯವಾಗುತ್ತದೆ.
Downloads
References
- ೧. ಚಿದಾನಂದಮೂರ್ತಿ ಎಂ., ವಚನ ಸಾಹಿತ್ಯ, ಸ್ವಪ್ನ ಬುಕ್ ಹೌಸ್, ಬೆಂಗಳೂರು, ೨೦೧೪
- ೨. ಭೂಸನೂರಮಠ ಸಂ.ಶಿ., ವಚನ ಸಾಹಿತ್ಯ ಸಂಗ್ರಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೨೦೦೬
- ೩. ಮುಗಳಿ ರಂ. ಶ್ರೀ., ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್, ಮೈಸೂರು, ೨೦೨೨
- ೪. ತಿಪ್ಪೇರುದ್ರಸ್ವಾಮಿ ಹೆಚ್., ಶರಣರ ಅನುಭಾವ ಸಾಹಿತ್ಯ, ಡಿ.ವಿ.ಕೆ. ಮೂರ್ತಿ, ಮೈಸೂರು, ೨೦೧೦
- ೫. ನಾಗಭೂಷಣಸ್ವಾಮಿ ಓ. ಎಲ್., ವಚನ ಸಾವಿರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೪